Thursday, September 22, 2016

ಪಯಣ

ನಡೆದಾಯ್ತು ಬಲುದೂರ ನೀನಿರುವ ಕಡೆಗೆ
ಬೆಳಕಾಯ್ತು ಅಂಗಳವು ನೀ ಬಂದ ಘಳಿಗೆ
ಪಡಿಯಕ್ಕಿ ಹರಡುತ್ತ ಬರುವಾಸೆ ನಿನಗೆ
ಕಿರುಬೆರಳ ಹಿಡಿಯುತ್ತ ನಿಲುವಾಸೆ ನನಗೆ
ಮಲ್ಲಿಗೆಯ ಬಳ್ಳಿಯಿದೆ ನೀ ಬರುವ ದಾರಿಯಲಿ
ಮಲ್ಲಿಗೆಯೆ ಮಾತಹುದು ಮುಂಬರುವ ಪಯಣದಲಿ

No comments: