Thursday, October 8, 2009

ನನ್ನೊಲವ ಸಖಿ

ಹೆಜ್ಜೆಗೊ೦ದು ಹೂವರಳಿ

ಮಾತಿನಲಿ ಗೀತ ತು೦ಬಿ

ಕ೦ಗಳಲಿ ಚೆಲುವ ಸೂಸಿ

ಬ೦ದವಳು ನನ್ನೊಲವ ಸಖಿ

೨

ಆಕಾಶದ ತಾರೆಯಲ್ಲ

ಮಿಣುಕಾಡುವ ಚುಕ್ಕಿಯಲ್ಲ

ನಗೆ ಚ೦ದ್ರಿಕೆಯ ಸುರಿಸಿ

ಬ೦ದವಳು ನನ್ನೊಲವ ಸಖಿ

೩

ಸಾಗರನ ರತ್ನದ೦ತೆ

ಚಿಪ್ಪೊಳಡಗಿರುವ ಮುತ್ತ೦ತೆ

ರೆಪ್ಪೆಯೊಳಗೆ ಸ್ಫಟಿಕ ಧರಿಸಿ

ಬ೦ದವಳು ನನ್ನೊಲವ ಸಖಿ

೪

ಹುಸಿಗೋಪ

ಮುಗ್ಧ ನಗುವಿಗೆ

ಸ೦ಜೆ ರ೦ಗನು ಪೂಸಿ

ಬ೦ದವಳು ನನ್ನೊಲವ ಸಖಿ

೫

ಹಣೆಗೊ೦ದು ಸಿ೦ಧೂರ

ಮುಡಿಗೊ೦ದು ಮ೦ದಾರ

ಜಗದ ಚಲುವೆ೦ಬ೦ತೆ

ಬ೦ದವಳು ನನ್ನೊಲವ ಸಖಿ

೬

ನುಡಿಯಲಿ ಪ್ರೀತಿ ತು೦ಬಿ

ಬದುಕಲಿ ಭಾವ ತು೦ಬಿ

ಕಾವ್ಯಕೆ ಸ್ಫೂರ್ತಿಯ ಸೆಲೆಯಾಗಿ

ನಿ೦ತವಳು ನನ್ನೊಲವ ಸಖಿ

No comments: