Wednesday, September 1, 2010

ಅಗ್ನಿಹೋತ್ರ (ಚತುರೋಕ್ತಿ ೫)

೧

ಒಲೆ ಉರಿದು ಬೆಳಕಾಯ್ತು, ಉರಿದು ಹುರಿಯಾಯ್ತು

೨

ನಾಲ್ಕು ನಾಲ್ಕುಗಳ ಆಳಕ್ಕಿಳಿದು ಅಗಲವಾಯ್ತು ನೋಡು

ನಾವು ಐವರು ಒಳಕ್ಕಿಳಿದು ಸಮಿಧೆಗಳಾದೆವು

೩

ಕರಣತ್ರಯ ತಾಪತ್ರಯಗಳನ್ನು ಮೀರಿ ನಿ೦ತದ್ದು ಹೀಗೆ

ಓ೦ ಭೂರಗ್ನಯೇ ಎ೦ದುಲಿದು ಉರುಳಿದೆ ಹೇಗೂ ಹಾಗೆ

ಕರಣಶುದ್ದಿ ಮುಖ್ಯ ಅ೦ತಃಕರಣ ಶುದ್ದಿಯೇ ಮಹಾತ್ಮ

೪

ದಿನದಿನವೂ ಅಗ್ನಿ ಅವಾಹಿಸು ಕ್ರಮೇಣ ನೀನು ಇಲ್ಲವಾಗು

ಹಾರಿದ ಪ್ರತಿಯೊ೦ದು ಕಿಡಿ ನಿರ್ಮಲವಾಗಿಸಲಿ

ಎಲ್ಲ ಕಡೆ ಉರಿದು ಮಿಕ್ಕದ್ದು ಬೂದಿ ಮಾತ್ರ

ಮೇಲೇರಿದ ಗೃಹಸ್ತ ಹಸ್ತದೊಳು ತೋರಿದ ಸೂತ್ರ

No comments: