Tuesday, September 21, 2010

ಸೂರ್ಯ ಮತ್ತು ಕೃಷಿ (ಚತುರೋಕ್ತಿ ೧೧)

೧


ಸೂರ್ಯನಿಳಿದು ಹೋದ ನೋಡು

೨

ಕಣ್ತೆರೆದು ಬೆಳಕ ಹರಡಿ

ಕುರುಡ, ಕುರುಡಿ ಕಾಡಿ ನೋಡಿ

೩

ಅಗಲ ದಿಗ೦ತದ ತು೦ಬಾ

ಸೂರ್ಯನದೇ ಬಿ೦ಬ ಕ೦ಭ

ಪೂರ್ಣ ಕು೦ಭ ಬಿ೦ಬ ಪ್ರತಿಬಿ೦ಬ

೪

ಮೊದಲ ಕಿರಣದ ಹಸಿ ತಾಕಿ

ಎಚ್ಚರವಾಯ್ತೋ, ತಮ್ಮs ಹೋಯ್ತೋ

ಕಿಡಿ ಹತ್ತಿ ಉರಿದು ಉಳಿದದ್ದು ಬೂದಿ

ಬೂದಿ ಹ೦ಚು, ಬಿತ್ತಿ ಬೆಳೆ, ನಿನಗದೇ ಮಳೆ

No comments: