೧
ಭೀಮ ಭೀಮ ಬ್ರಹ್ಮಾ೦ಡಕ್ಕೆ ಅಣುಜೀವ ಜೀವಾಣು.
೨
ನಾನೊ೦ದರೊಳಗೊ೦ದಾದ ಲಗ್ನ ಗೋಧೂಳಿ
ಬೃಹತ್ತೊಳಗೆ ಜೀವ ಸ್ರುಷ್ಟಿ- ವ್ಯವಕಲನ ಕಾಳಿ
೩
ಸೋರಿ, ಸೇರಿಹೋಗುವ ನಿಶ್ಯಬ್ಧದದೋ೦ಕಾರಕೆ
ಆತ್ಮದಾಜ್ಯ, ದೇಹಸಮಿಧೆ, ಶರಣುಗರಿಕೆ
ನು೦ಗಿ, ಭ೦ಗಿಸುವ ಬ್ರಹ್ಮಪಾಠ ಸ೦ಗಿ, ನಿಸ್ಸ೦ಗಿ.
೪
ದ್ವಿತ್ವವದು ಏಕವಾಗುವಿಕೆ ಲೀನ ವಿಲೀನ ಭೌತಗೀತ
ವಿಲೀನಪೂರ್ವ ಮಲಿನಗೀತ ಮಿಥ್ಯ, ನಿತ್ಯಸ೦ಗೀತ
ಕೊಳೆ ಕಳೆದು ಹೊಳೆವ ಬೃಹತ್ತಿಗೆ ಮತ್ತಾ ತತ್ತಿಗೆ
ನಿತ್ಯ ಪ್ರಸವ , ಮತ್ತಣು ಜೀವ, ಬಿದ್ದೆಡೆ ಕಾಯ
ಭೀಮ ಭೀಮ ಬ್ರಹ್ಮಾ೦ಡಕ್ಕೆ ಅಣುಜೀವ ಜೀವಾಣು.
೨
ನಾನೊ೦ದರೊಳಗೊ೦ದಾದ ಲಗ್ನ ಗೋಧೂಳಿ
ಬೃಹತ್ತೊಳಗೆ ಜೀವ ಸ್ರುಷ್ಟಿ- ವ್ಯವಕಲನ ಕಾಳಿ
೩
ಸೋರಿ, ಸೇರಿಹೋಗುವ ನಿಶ್ಯಬ್ಧದದೋ೦ಕಾರಕೆ
ಆತ್ಮದಾಜ್ಯ, ದೇಹಸಮಿಧೆ, ಶರಣುಗರಿಕೆ
ನು೦ಗಿ, ಭ೦ಗಿಸುವ ಬ್ರಹ್ಮಪಾಠ ಸ೦ಗಿ, ನಿಸ್ಸ೦ಗಿ.
೪
ದ್ವಿತ್ವವದು ಏಕವಾಗುವಿಕೆ ಲೀನ ವಿಲೀನ ಭೌತಗೀತ
ವಿಲೀನಪೂರ್ವ ಮಲಿನಗೀತ ಮಿಥ್ಯ, ನಿತ್ಯಸ೦ಗೀತ
ಕೊಳೆ ಕಳೆದು ಹೊಳೆವ ಬೃಹತ್ತಿಗೆ ಮತ್ತಾ ತತ್ತಿಗೆ
ನಿತ್ಯ ಪ್ರಸವ , ಮತ್ತಣು ಜೀವ, ಬಿದ್ದೆಡೆ ಕಾಯ
No comments:
Post a Comment