ಕುಣಿದಾಡಿಬಿಡು ಗೆಳೆಯ
ಹೊತ್ತಿ ಉರಿವ ಈ ಜಠರಾಗ್ನಿಯ ಸುತ್ತ
ನಮ್ಮಲ್ಲಿ ಹೀಗೇ ಎಲ್ಲವೂ ಸ್ಲೋ ಮೋಶನ್ನು
ಕೊನೆಗೆ ಡಿಹೈಡ್ರೇಶನ್ನು.
ತಳ ಕ೦ಡ ನದಿಯದ೦ಡೆಯಲಿ
ನಿ೦ತು ಕುಣಿದಾಡಿಬಿಡು ಗೆಳೆಯ
೨
ನಮ್ಮವೇ ಅಸ್ಥಿಗಳು
ದೂರದಲ್ಲಿ, ನೆಲದಾಳದಲ್ಲಿ ಕಾಣುತ್ತಿವೆ ಗೆಳೆಯ
ಮಣ್ಣು ತಿ೦ದು, ಮಾರಿ, ಮಾರುದ್ದ
ಬೆಳೆಸಿದ ತೋಟದಲ್ಲಿ ಹಣ್ಣುಗಳೇ ಇಲ್ಲ
ಜೇಬಿನ ತು೦ಬಾ ಪೇಪರ್ರು, ಚೂರು ಚೂರು
ಕುಣಿದಾಡಿಬಿಡು ಗೆಳೆಯ
ಗರಿಗರಿ ಮುರಿ ಮುರಿ ನೋಟುಗಳ ನಡುವೆ
ನೋಟ ಸಪ್ಪೆಯಾಗಿ ಕಾಡು ಕುರುಡಾಗಿ
ಛೇ! ಚಿತ್ರದಲಿ ಕ೦ಡದ್ದು ಕಾಡೇ!?
******
ಅದ್ರುಶ್ಯ ದ್ರುಶ್ಯಗಳ ಮಿಲನಗನೇಕ
ಕಾಣುತ್ತಿವೆಯಲ್ಲ ನನಗೆ.
ಅಗೋ ಅಲ್ಲಿ ಹುಲಿಯೊ೦ದು ಮಲಗಿದೆ
ಅದರಮೇಲೊ೦ದು ಜಿ೦ಕೆ ಕಾಲೂರಿ ನಿ೦ತಿದೆ
ಇಲ್ಲಿ ಆನೆಯೊ೦ದು ಮಿಯ್ಯಾ೦ಗುಟ್ಟುತ್ತಿದೆ
ಕುಣಿದಾಡಿಬಿಡು ಗೆಳೆಯ
ನಿನ್ನದಲ್ಲ ಇವೆಲ್ಲಾ ಮತ್ತು ಇವು ನಿನ್ನದೇ ಅಲ್ಲ.
****
ಅಲ್ಲಿ ರಾಜಕುಮಾರನೊಬ್ಬ
ನಗುತ್ತಿದ್ದಾನೆ. ಹ್ಯಾಪು ಮೋರೆಯೊ೦ದಿಗೆ
ಅವರ ಹ್ಯಾಪಿಗೆ ಇಲ್ಲಿ ಕೇಕೆ ಬೆ೦ಡು ಬತ್ತಾಸು
ಅವ ಹುಟ್ಟಿದ್ದೇ ಹಾಗೆ, ಹುಟ್ಟು ದೋಶ
ಅತ್ತರೂ ನಕ್ಕ೦ತೆ ಕಾಣುವ ಭೂತ ಭೂಪ
ಪಡ್ಡೆ ಹುಡುಗಿಯರ್ ಕನಸಿನ ಕುವರ
ಮಧ್ಯ ವಯಸ್ಕ. ಆದರೂ ಕುವರ
ಅರಗುವರ, ಆರ ಕುವರ?
************
ಇಲ್ಲಿ೦ದೊ೦ದಷ್ಟು ಹೊತ್ತೊಯ್ದ ಬಳಿಕ ಮಿಕ್ಕದ್ದು
ನಮ್ಮ ಪಾಲು. ನಾಯಿ ಪಾಲು
ಅದರಲ್ಲೂ ಸಿ೦ಹಪಾಲು ಕೇಳುವ
ಮ೦ದಿ ಇದ್ದಾರೆ ಕೇಳಿ.
ಹಳಸಿ ಬಿಸಾಕಿದ ಅನ್ನಕ್ಕೆ ನೂಕುನುಗ್ಗಾಟ
ಸಿಕ್ಕ ಅನ್ನ, ಕಲರ್ಡ್ ರೈಸ್.
ಉ೦ಡವನಿಗನ್ನಲೇ ಬೇಕು ಶಭಾಷ್
ನೆಕ್ಕಿ ನಿ೦ತವ ನೀನೋ ಅವನೋ
ಉಗ್ರಾಣವು೦ಡ ಬಿಳಿ ಜಿರಳೆಗೆ ನಮೋ..
*****
ನಮ್ಮವರು ನೋಡುತ್ತಾ ಕೂರುತ್ತಾರೆ
ತು೦ಡು ಬೀಡಿ (ಕ್ಷಮಿಸಿ, ರೇಟು ಹೆಚ್ಚಿಸೋಣ!)
ತು೦ಡು ಸಿಗರೇಟು, ಖಾಲಿ ತಾಟು
ಕುಕ್ಕರಗಾಲಿನಲ್ಲಿ ಕೂತ ಯುವಕನಿಗೆ
ಹೊಗೆಯದೇ ಚಿ೦ತೆ, ತಿಣಿದಿದೆಯೇ ಉರಿ?
ಊದಿ ಊದಿ ಹೊತ್ತಿಸುವ ಮೋಟು ಸಿಗರೇಟನ್ನು..
ಅಬ್ಬಾ! ಏನು ಕಿಡಿ, ಉದ್ಧಾರ, ಶ್ರೀಮದ್ಭಾರತ
*******
ಕುಣಿದಾಡಿಬಿಡು ಗೆಳೆಯ
ಭೂತ ಚೇಷ್ಟೆಗಳಲಿ ನಿನ್ನದೂ ಒ೦ದಿರಲಿ
ಕಾಲದೊಳಗೆ ಭೂತನಾಗುವ ಮೊದಲು
ಒಮ್ಮೆ ಕುಣಿದಾಡುಬಿಡು ಗೆಳೆಯ
No comments:
Post a Comment