Wednesday, September 26, 2012

ಕೊಳೆತ - ಮೌನ

ಹೆಣಗಾಡಿದ ಹನುಮನ ಬ೦ಟ




ಗೊಲ್ಲಪಡೆಯ ವಿಪರೀತ ತು೦ಟ

ಓಡಿದ್ದೇ ಬ೦ತು ಘಟನೆಗಳ ದಾರಿ



ಆ ದಾರಿ ಈ ದಾರಿ ದೂರದಾರಿಯ ವಾಕರಿಕೆ

ಸಿಕ್ಕಷ್ಟು ಬಾಚಿಕೊ೦ಡವನಿಗೆ ಸಿಕ್ಕಿದ್ದು ಬಾಚಣಿಕೆ

ಕೂದಲಿಲ್ಲದ ತಲೆಯಲ್ಲಿ ಇದ್ದದ್ದು ಖಾಲಿ ಮಡಿಕೆ



ತುರುಸಿಕೊಳ್ಳಲೂ ಹೊತ್ತಿಲ್ಲದ ಹಾವಳಿಗಳೇದುಸಿರು

ಮರೆವಿನ ಮಹಲಿನಲಿ ಮೋಹಕ ಮಾತುಕತೆ

ಅಲ್ಲಿ ಇಲ್ಲಿ ಇಣುಕಿ ಕಚ್ಚಿಕೊ೦ಡು ಓಡುವ ಇಲಿಯೋಡಾಟ

ಅಬ್ಬಾ! ಎ೦ದುಸಿರಾಡಿ ಕೂತಲ್ಲಿ, ಹೊಲಸು ರಾಡಿ ಕೆಸರು

No comments: