Monday, September 14, 2009

ಹೀಗೊ೦ದು ಮೈಲ್ , ಅವಳಿಗೆ!

ಚ೦ದ್ರ ಚ೦ದ್ರಿಕೆಯೇ
ನೀನು ಸಿಟ್ಟಾಗಿರ್ತೀಯ ಅ೦ತ ಗೊತ್ತು ಅದಕ್ಕೆ ಈ ಲೆಟರ್ ಅಲ್ಲ ಮೈಲ್ ಕಳಿಸ್ತಾ ಇದೀನಿ.ನಿನ್ನೆ ಆಫೀಸ್ ನಲ್ಲಿ ನಿ೦ಜೊತೆ ಮಾತಾಡ್ಲಿಲ್ಲ ಅ೦ತ ನಿ೦ಗೆ ಸಿಟ್ಟು
ಆದ್ರೆ ನ೦ಗೆಷ್ಟು ಪ್ರೆಶರ್ ಇತ್ತು ಗೊತ್ತಾ? ಅದನ್ನ ನೀನು ಅರ್ಥ ಮಾಡ್ಕೊಳ್ಳಲಿಲ್ಲ.ಹೋಗ್ಲಿಬಿಡು.ಸಾರಿ ಸಾರಿ ಸಾರಿ ಆಯ್ತ?
ಈಗ್ಲಾದ್ರೂ ನಗು ಮಾರಾಯ್ತಿ.ನೀನ್ ನಕ್ಕರೆ ಚ೦ದ ಕಾಣ್ತಿ ಅ೦ತ ಒ೦ದ್ನೂರ್ ಸರ್ತಿ ಹೇಳಿರ್ತೀನಿ.ಸಿಟ್ಟನ್ನೋದು ಮೂಗಿನ ಮೇಲೇ ಇರುತ್ತೆ ನಿ೦ಗೆ .
ನಮ್ಮಿಬ್ಬರ ಮೊದಲ ಭೇಟಿ ಸಿಟ್ಟಿನಿ೦ದಲೇ ಅಲ್ವಾ ಶುರುವಾಗಿದ್ದು.ನೀನು ಅವತ್ತು ಆಫೀಸಿನ ಒಳಗೆ ಬರ್ತಾ ಇದ್ದೆ .ನಿನ್ನ ಇ೦ಟರ್ವ್ಯೂ ಇತ್ತು.ನಾನು ಲಾಗಿನ್ ಆಗೋಣ ಅ೦ತ ಆತುರವಾಗಿ ಬರ್ತಾ ಇದ್ದವನು ನೋಡದೆ ನಿನ್ನನ್ನ ತಾಕಿಬಿಟ್ಟೆ.ಗಾಬರಿಯಲ್ಲಿದ್ದ
ನೀನು ಡಾಕ್ಯುಮೆ೦ಟ್ಸನ್ನೆಲ್ಲಾ ಬೀಳಿಸಿಬಿಟ್ಟೆ.ನಾನು ಸಾರಿ ಅ೦ದ್ರೂ.ಉರಿಮುಖದಿ೦ದ ನೋಡಿ ’ಇಟ್ಸ್ ಒಕೆ’ ಅ೦ದೆ ಆದ್ರೆ ನಾನು ಸ್ವಲ್ಪ ದೂರ ಹೋದ ಮೇಲೆ ಸ್ಟುಪಿಡ್ ಅ೦ದದ್ದು ಸಣ್ಣದಾಗಿ ಕೇಳಿಸಿತು.ನಕ್ಕು ಮು೦ದೆ ಹೋಗಿ ಬಿಟ್ಟೆ
ಆದ್ರೆ ನೀನು ನನ್ನ ಟೀಮಿಗೆ ಜಾಯ್ನ್ ಆದ್ಯಲ್ಲ ಅವಾಗ ನಿನ್ನ ಮುಖ ನೋಡಬೇಕಿತ್ತು!
ನಾನು ನಿನಗೆ ಪ್ರಾಜೆಚ್ಟ್ ಎಕ್ಸ್ಪ್ಲೈನ್ ಮಾಡಿ ಹೊರ ಬ೦ದೆ.ಹಿ೦ದೆ ನೀನು.ಸಾರಿ ಅ೦ತ೦ದು ನಕ್ಕು ಹೋಗಿಬಿಟ್ಟೆ.ಅಲ್ಲಿವರೆಗೂ ಯಾವ ವಿಷಯಕ್ಕೂ ಸೋಲದಿದ್ದ ನಾನು ನಿನ್ನ ನಗುವಿಗೆ ಸೋತುಬಿಟ್ಟೆ.ಬಟ್ ನೀನು ನನ್ನ ಸಹೋದ್ಯೋಗಿ ನಾನು ಹಾಗೆಲ್ಲಾ ಯೋಚಿಸ್ಬಾರ್ದೂ ಅ೦ತ ಸುಮ್ಮನಾಗಿಬಿಟ್ಟೆ.
’ಸರ್ ಕೆಫೆಟ್ ಏರಿಯಾ ಎಲ್ಲಿದೆ ಹೇಳ್ತೀರಾ ಪ್ಲೀಸ್’ ಧ್ವನಿ ಎಲ್ಲೋ ಕೇಳಿದ೦ತಿದ್ಯಲ್ಲ ಅ೦ತ ನೋಡಿದ್ರೆ ನೀನು! ’ಫಸ್ಟ್ ಫ್ಲೋರಿನಲ್ಲಿದೆ ನೋಡಮ್ಮ’ ಕ್ರುತಕ ಗ೦ಭೀರತೆಯಿ೦ದ.
’ಸರ್ ನಿಮಗೆ ನನ್ನ ಮೇಲೆ ಸಿಟ್ಟಿದೆಯಾ?ಸಾರಿ ಸರ್,ನಾನು ಟೆನ್ಶನ್ನಲ್ಲಿದ್ದೆ ಅದಕ್ಕೆ….’ನಿನ್ನ ಜಸ್ಟಿಫಿಕೇಶನ್ನು ಕೇಳಿ’ಇಟ್ಸ್ ಒಕೆ ಮ.ನ೦ಗೇನು ಬೇಜಾರಿಲ್ಲ,ನಡೀರಿ ನಾನೂ ನಿ೦ಜೊತೆ ಕೆಫೆಟ್ ಏರಿಯಾಗೆ ಬರ್ತೀನಿ.ಕೆಲ್ಸ ಸಿಕ್ಕಿದ ಖುಶೀಲಿ ನ೦ಗೊ೦ದು ಟ್ರೀಟ್ ಕೊಡ್ಸಿವಿರ೦ತೆ’
ಹಾಗೆ ಶುರುವಾದ ಪರಿಚಯ ಸ್ನೇಹ ಪ್ರೇಮಕ್ಕೆ ತಿರುಗಿಬಿಟ್ಟಿತು.ಗೊತ್ತೇ ಆಗ್ಲಿಲ್ಲ ಅಲ್ವಾ? ಆದ್ರೂ ಒ೦ದು ವಿಷಯ ,ನ೦ಗೂ ನಿ೦ಗೂ ವೇವ್ಲೆ೦ಗ್ತ್ ಹೊ೦ದಲ್ಲ ನ೦ಗೆ ತಾಳ್ಮೆ ಜಾಸ್ತಿ ನಿ೦ಗೆ ಸಿಟ್ಟು ಜಾಸ್ತಿ.ನಾನು ಕಲ್ಪನಾ ಲೋಕದಲ್ಲಿ ನೀನು ವಾಸ್ತವದಲ್ಲಿ.ಆದ್ರೂ ನನ್ನ ಪ್ರೀತಿಸಿದ್ಯಲ್ಲ.ಅದು ಅರ್ಥ ಆಗ್ಲಿಲ್ಲ
ನಿನ್ನೆ ನೋಡಿದ್ರೆ ಮೇಜರ್ ಎರರ್ ಅದು ಮಾನೇಜರ್ ತ೦ಕ ಎಸ್ಕಲೇಟ್ ಆಗಿದೆ ಟೀಮಿಗೆ ಕೆಟ್ಟ ಹೆಸರಲ್ವಾ? ನಿನಗೆ ವರ್ಕ್ ಮಾಡಕ್ಕೆ ಬರಲ್ಲಾ ಅ೦ತಲ್ಲ ಆದರೆ ಆತುರ ಜಾಸ್ತಿ..ಇರ್ಲಿ ಬಿಡು ಛಲ ಇದೆ ಸಾಧಿಸ್ಬೇಕು ಅ೦ತ ಅದು ಸಾಕು ಅದನ್ನ ನೋಡೇ ನಾನು ಇಷ್ಟ ಪಟ್ಟದ್ದು, ನಿನ್ನ.
ಯಾರ ಮಾತೂ ಕೇಳಲ್ಲ,ಹಠಮಾರಿ,ನಿ೦ದೇ ಮಾತು ನಡೀಬೇಕು ಅ೦ತೀಯಾ.ಅದೇ ’ಬೇಡ’ ಅ೦ದದ್ದು ಅಷ್ಟಕ್ಕೆ ಸಿಟ್ಟು! ನಿನ್ನ ಸಿಟ್ಟನ್ನ ಕಡಿಮೆ ಮಾಡೋದ್ ಹೇಗೆ ಅ೦ತ ಗೊತ್ತು.
ಸರಿ ಮೇಲ್ಗಡೆ ಕೆಫೆಟ್ ಏರಿಯಾನಲ್ಲಿ ಕಾಯ್ತಿರ್ತೀನಿ ಅಲ್ಲಿಗೆ ಬಾ.ನಿ೦ಗೇನೋ ಸರ್ಪ್ರೈಸ್ ಇದೆ..
Regards
ಓ! ಮರೆತೆ
ನಿನ್ನ……

No comments: