Wednesday, October 21, 2009

ಕೃಷ್ಣ ಕ೦ಡನು

ಕೃಷ್ಣ ಕ೦ಡನು ಕೇಳಿರೆ

ಗೋಪಿಯರೆಲ್ಲಾ ||ಪ||



ಹೊಳೆವ ಕಿರೀಟವಿಲ್ಲ

ಶ೦ಖ ಚಕ್ರಗಳಿಲ್ಲ

ಯಾದವರ ಬಳಗವಿಲ್ಲ

ಭಾಮೆ ರುಕ್ಮಿಣಿಯಲಿಲ್ಲ





ಕಪಟ ನಾಟಕಿಯಲ್ಲ

ಮೋಹನ ರೂಪನಲ್ಲ

ಕೊಳಲ ಪಿಡಿದವನಲ್ಲ

ಪಾರ್ಥ ಸಾರಥಿಯಲ್ಲ



ಅರಿಭಯ೦ಕರನಲ್ಲ

ವ್ಯೋಮವ್ಯಾಪಿ ಇವನಲ್ಲ

ಗ೦ಭೀರ ವದನವ ಪೊತ್ತು

ನೀತಿ ಹೇಳುವನಲ್ಲ



ಅ೦ಕೆಗೆ ಸಿಗದವನು

ಶ೦ಕೆಯ ಬಿಡಿಸುವವನು

ಮ೦ಕುದಿಣ್ಣೆಯಿವನು

ಕೇಳಿರೆ, ಹೇಗಿಹನು



ನನ್ನೊಳಗೆ ಛಲದಿ೦ದ

ಕುಳಿತು ಬಲು ಒಲವಿ೦ದ

ನಾನು ನೀನು ಒ೦ದೇ ಎ೦ದ

ಶ್ರೀ ಗುರು ಶ೦ಕರನ

ಸಿರಿ ಹರಿಯು ತಾನೆ೦ದ

No comments: