Wednesday, December 9, 2009

ಬರೆಯಲೇಬಾರದೆ೦ದು ಕೂತವನಿಗೆ

ಬರೆಯಲೇಬಾರದೆ೦ದು ಕೂತವನೊಳಗೆ


ಹೆಪ್ಪು ಗಟ್ಟಿದೆ ಸಾಲುಗಳು

ಗಟ್ಟಿಯಾಗುತ್ತಲೇ

ಗುಟ್ಟಾಗುತ್ತಿವೆ

ಒಗಟಾಗುತಿವೆ

ಮತ್ತು ಜಿಗುಟಾಗುತಿವೆ

ಗಟ್ಟಿಗೊ೦ಡಷ್ಟೂ ಒರಟಾಗುವ

ಸಾಲುಗಳಲಿ

ಎ೦ದೋ ಅನುಭವಿಸಿದ

ಸ್ಪರ್ಷವಿದೆ

ನೆನೆದು ಒದ್ದೆಯಾದ

ಭಾವವಿದೆ

ಮುಗುಳು ನಗೆಯ

ಚೆಲುವಿದೆ

ಶವವಾದಾಗಿನ

ಮೌನವಿದೆ

ಸುಮ್ಮನಿರಲಿ ಹೇಗೆ?

ಬರೆಯಲೇಬಾರದೆ೦ದು ಕೂತವನೊಳಗೆ

ಕಾಡುವ ಮೌನ

ಒತ್ತರಿಸಿ ಬರುವ ಸ೦ಕಟ

ಬಿಕ್ಕಳಿಸಲಗದೆ ಕಟ್ಟುವ

ಗ೦ಟಲು(ಅದಕ್ಕೂ ನನ್ನ ಮೇಲೆ ಕೋಪ)

ಯಾರದೋ ಮದುವೆ

ಇನ್ಯಾರದೋ ಮಸಣಯಾತ್ರ್ರೆಯ

ನೋಡಿ ಬರೆದ ಪದಗಳು

ಅಣಕಿಸುತಿವೆ

ಬರೆಯಲೇಬಾರದೆ೦ದು ಕೂತವನಿಗೆ

ಅ೦ಗಿಯ ಜಗ್ಗಿ

ಕಿವಿಯಲಿ ಪಿಸುಗುಟ್ಟಿ

ಬಿಸಿಯುಸಿರ ತಾಕಿಸಿ

ಗಟ್ಟಿಯಾದ ಭಾವಗಳನು

ಹರಿಬಿಡಲು ನೆರವಾದವಳು

ನೀನೇ ಹುಡುಗಿ

No comments: