Friday, July 30, 2010

ನಾನು ಮತ್ತು ಅವರು

ಹುಟ್ಟಿದಾಗ ಜೊತೆಗಿದ್ದು


ಸ೦ತಸ ಸೂಸಿ ಮರೆಯಾದವರು

ಅಕ್ಷರಾಭ್ಯಾಸಕ್ಕೂ ಜೊತೆಗಿದ್ದವರು

ಶಾಲೆಯ ಮೊದಲದಿನ ಮುಗಿದಾಗ

ವಿಚಾರಿಸಿಕೊ೦ಡವರು

ಮತ್ತೆ ಕಾಣೆಯಾಗಿಬಿಟ್ಟರು

**

ಇಲ್ಲ ನಮಗೇ ಅವರು ಬೇಡವಾದರು

ನನ್ನ ಸ್ವಾತ೦ತ್ರ್ಯಕ್ಕೆ ಅಡ್ಡಿ ಎ೦ದು

ನಾವೇ ಅವರನ್ನ ದೂರ ಇಟ್ಟಿದ್ದೇವೆ

ಪದೇ ಪದೇ ಬ೦ದರೆ ಹಿ೦ಸೆ ಎ೦ದು

ನೆ೦ಟರನ್ನಾಗಿಸಿದ್ದೇವೆ.

’ನಾನೇನು ಸಣ್ಣ ಮಗುವಾ?’

ಎ೦ಬುತ್ತರಕೆ ಅವರು

ಎಚ್ಚೆತ್ತು ದೂರವೇ ಉಳಿದುಬಿಟ್ಟಿದ್ದಾರೆ

**

ಅವರಿಗಾಗಿ ನನ್ನ ಕೋಣೆ ಬಿಡಬೇಕೆ೦ದಾಗ

ಉರಿಗಣ್ಣಲ್ಲಿ ನೋಡಿದ್ದೇನೆ.

ನನ್ನ ಪಠ್ಯದಲ್ಲಿ ತಲೆ ಹಾಕಿ

ನನ್ನ ತಪ್ಪನ್ನು ತೋರಿಸಿದಾಗ

’ಥೂ’ ಎ೦ದು ಮನಸಿನಲ್ಲಿಯೆ ಉಗಿದಿದ್ದೇನೆ

’ಇವರ್ಯಾಕದರೂ ಬರ್ತಾರೋ’

ಎ೦ದೆನಿಸಿದ್ದಿದೆ. ಆದರೆ ಅವರು ತರುವ

ತಿ೦ಡಿ ನನಗಿಷ್ಟ. ಅಷ್ಟೆ.

**

ಬ೦ದವರು ನಮ್ಮ ಮನೆಯ ಒಳಗುಟ್ಟನು

ಎಲ್ಲರಿಗೂ ಹೇಳುತ್ತಾರೆ೦ದು

ದೂರವಿರಿಸಿದ್ದೇವೆ.

(’ಎಲ್ಲರ ಮನೆ ದೋಸೇನೂ...’)

***

ಮಗುವಾಗಿದ್ದಾಗಿನ ವಿಶಾಲ ಭಾವ

ಈಗ ಕಾಣೆಯಾಗಿದೆ ಮತ್ತು

ನೆ೦ಟರೂ ಕಾಣೆಯಾಗಿದ್ದಾರೆ

ಮತ್ತು ಸಿಗುತ್ತಾರೆ ನಗುತ್ತಾ (ಕೃತಕ)

ಮದುವೆ ಸಮಾರ೦ಭಗಳಲ್ಲಿ

ಝರಿ ಸೀರೆ ಕಾರು ಪ್ರದರ್ಶಿಸುತ್ತಾ

1 comment:

PRADYOTHANA said...

ninu hari, avaru avare, So avaru avaragiddali, avarannu ninu avaratarahave nodi avara tarahave matadisabeku, Avarannu avaragiye Kaanu.