Sunday, September 5, 2010

ಸಾರ್ತ್ರೆ ಮತ್ತು ಪಾತ್ರೆ (ಚತುರೋಕ್ತಿ ೯)



ನನ್ನ ಇರುವಿಕೆ ಇಲ್ಲವಾಯ್ತು


ಕಾಲ ದೇಶಗಳಲ್ಲಿ
ಕಳೆದುಹೋಯ್ತು


ಎಲ್ಲಾ ಹೊರ ಚೆಲ್ಲಿದ ಮನಸ್ಸು
ನಿಜದಲ್ಲಿ ನಥಿ೦ಗ್ನೆಸ್ಸು(nothingness)
ಅದರಿ೦ದದಕಾಗಿ ಹೊರಡು


ತುಳುಕಿ ಹೊರಬ೦ದ ಮೇಲೆ
ಪಾತ್ರೆಯಾಕಾರದ ವಸ್ತು ಅಷ್ಟೆ
ಸಾರ್ತ್ರೆಯ ವಾದ ನಿರ್ವಿವಾದವಷ್ಟೆ
ಇರು ಇಲ್ಲದಿರು ಮೇಲಿನ್ನೊ೦ದಷ್ಟೆ

No comments: