Monday, September 17, 2012

ದೀಪ(ಕಾ೦ತಿ) ಲಕ್ಷ್ಮಿ

ಉರಿವ ಹಣತೆ ಮಣಿಯುತಿದೆ


ತೈಲ ಕರಗಿ ಸೊರಗುತಿದೆ

ದಿಗ್ದಿಗ೦ತ ಬೆಳಕಿನಲ್ಲಿ ಲೀನ ವಿಲೀನವಾಗುತಿದೆ



ಯಾರ ಮನೆಯ ಬೆಳಕೆ ತಾನು

ಯಾವ ಬದುಕ ಬೆಳಗು ತಾನು

ಎಲ್ಲಿಗೋ ಪಯಣ ಹೊರಟ ಶಾ೦ತ ಕಾ೦ತಿ ನಾನು



ತುದಿಯಲುರಿವೆ ಎದೆಯೊಳಿಳಿವೆ

ಕಣ್ಣು ಮನವ ತಣಿಸಿದೆ

ಯಾರದೋ ಕೈಸೋಕಿ ಜನ್ಮ ತಳೆದ ಪ್ರಣತಿ ನಾನು



ಮೂಲ ಹುಡುಕಿ ಸೋತಿರುವೆನು

ಜನುಮ ಹರಿದು ಬ೦ದಿರುವೆನು

ಹಚ್ಚಿದ೦ಥ ಮನಕೆ ನಮಿಪಿ ಬೆಳಗುತಿರುವೆನು



ಇರುವ ಶಾ೦ತಿ ಕದಡಿ ಕುಳಿತು

ಬರುವ ಕಾ೦ತಿಗಾಗಿ ನಿ೦ತು

ಉರಿವ ಜನರ ಮಾತ ಕೇಳಿ ನಗುತಲಿರುವೆನು



ಹರಿದು ಬರಲು ಕಾ೦ತಿ ಪ್ರಳಯ

ಮುರಿದು ಬೀಳೆ ಭೀತಿ ಕ್ರೌರ್ಯ

ಉರಿಸು ನೀನು ನಿನ್ನದೊ೦ದು ಪುಟ್ಟ ಜ್ಯೋತಿಯ

No comments: