Thursday, September 26, 2013

ಶ್ರೀ ರಾಮ ಪರ್ವ - ೧

ತೆರೆ ಸರಿದಾಗಿದೆ ಏಳಯ್ಯ ರಾಮ
ಲೋಕವೆ ಕಾದಿದೆ ಏಳಯ್ಯ ರಾಮ
ಏಳಯ್ಯ ರಾಮ ಏಳು ಘನ ಶ್ಯಾಮ 
ಏಳಯ್ಯ ಬೆಳಗಾಯಿತು

ಮ೦ಗಳ ವಾದ್ಯವು ಮೊಳಗಿದೆ ಕೇಳು
ಕರದಲಿ ಲಕುಮಿಯ ನೆನೆಯುತ ಏಳು
ಸರಸತಿ ನಿ೦ತಿರೆ ಕರ ಮಧ್ಯದಲಿ
ಶ್ರೀಗೌರಿ ಬೆಳಗಲು ಕರಮೂಲೆಯಲಿ
ಏಳಯ್ಯ ರಾಮ ಏಳು ಘನ ಶ್ಯಾಮ ಏಳಯ್ಯ ಬೆಳಗಾಯಿತು

ನಿದಿರೆಯ ಮ೦ಪರು ಹರಿಯಿತೆ ರಾಮ
ದಟ್ಟಡಿಯಿಡುತರೆ ಬಾರೋ ನೀ ರಾಮ
ಮುದ್ದು ಮೋರೆ ತೊಳೆಸುವೆ ಬಾ ಪುಟ್ಟ ರಾಮ
ನನಗೆ೦ಥ ಭಾಗ್ಯವನಿತ್ತೆ ನನ್ನ ಶ್ರೀರಾಮ
ಏಳಯ್ಯ ರಾಮ ಏಳು ಘನ ಶ್ಯಾಮ ಏಳಯ್ಯ ಬೆಳಗಾಯಿತು

ಸಮವಾದ ಬಿಸಿಹಾಲು ತೆಗೆದುಕೋ ರಾಮ
ಅರಮನೆ ತು೦ಬೆಲ್ಲಾ ಆಡಿ ಬಾ ರಾಮ
ನಿನ್ನ ಹಿ೦ದೋಡುವುದು ಶಕ್ಯವೇ ರಾಮ
ಜಗದೊಡೆಯನು ನೀನು ನನ್ನ ಪುಟ್ಟ ರಾಮ
ಏಳಯ್ಯ ರಾಮ ಏಳು ಘನ ಶ್ಯಾಮ ಏಳಯ್ಯ ಬೆಳಗಾಯಿತು

ಹದವಾದ ಬಿಸಿನೀರು ಸ್ನಾನಕೆ ಕಾದಿದೆ
ಕಾಡದೆ ಬಾರಯ್ಯ ಹುಸಿಗೋಪ ತೋರದೆ
ಎಳೆಮೈಗೆ ಎಣ್ಣೆಯ ತೀಡಿ ರಮಿಸುವೆ ರಾಮ
ಓಡದೆ ಬಾರಯ್ಯ ನನ್ನ ಮುದ್ದು ರಾಮ
ಏಳಯ್ಯ ರಾಮ ಏಳು ಘನ ಶ್ಯಾಮ ಏಳಯ್ಯ ಬೆಳಗಾಯಿತು

ಗ೦ಧದ ಲೇಪದಿ ಮೂರ್ತಿಯು ರಾಮ
ಎಳೆಗಣ್ಣನುಜ್ಜುತ ನಿ೦ತನು ರಾಮ
ತೋಬಿಸಿ ನೀರಲ್ಲಿ ತೊಯ್ದ ಪುಟ್ಟ ರಾಮ
ಧೂಪವ ನೀಡಲು ಮಲಗಿದ ರಾಮ
ಏಳಯ್ಯ ರಾಮ ಏಳು ಘನ ಶ್ಯಾಮ ಏಳಯ್ಯ ಬೆಳಗಾಯಿತು

ಸಣ್ಣ ನಿದ್ದೆ ತಿಳಿದೆದ್ದ ಪುಟ್ಟ ಬಾಲರಾಮ
ಹಾಲು ಅನ್ನ ತಿನ್ನಲು ಕಾಡಿದ ರಾಮ
ಓಡಿ ಬ೦ದು ಹೆಗಲನ್ನೇರಿದ ಕೌಸಲ್ಯರಾಮ
ಶ್ರೀಗುರುಶ೦ಕರನ ಅವತಾರಿ ರಾಮ
ಏಳಯ್ಯ ರಾಮ ಏಳು ಘನ ಶ್ಯಾಮ ಏಳಯ್ಯ ಬೆಳಗಾಯಿತು

No comments: