Thursday, September 26, 2013

ಶ್ರೀ ರಾಮ ಪರ್ವ - ೨

ಹೋಗೋಣ ಆಟಕೆ ಬಾರೋ ರಾಮ
ಹೋಗೋಣ ಬಯಲಿಗೆ ಬಾರೋ ರಾಮ
ಬಾರೋ ರಾಮ ಬಾರೋ ರಾಮ

ಜೋಡಿಯ ಹಿಡಿದು ಓಡೋ ರಾಮ
ಜೊತೆಯಲ್ಲೆ ನಡೆಯುವ ಜೋಡಿಯು ರಾಮ
ಕಾಡಿಗೆ ಕಣ್ಣದು ಕರೆವುದು ರಾಮ
ಲಕುಮಿಯು ಬರುವುದ ಕಾಣುವೆ ರಾಮ

ಕಣ್ಣನು ಮುಚ್ಚುವೆ ಹಿಡಿಯೋ ರಾಮ
ಕತ್ತಲೆ ತು೦ಬಿದ ಮನಸಿದೆ ರಾಮ
ನೆತ್ತಿಗೆ ಹತ್ತಿದ ಪ್ರೀತಿಯು ರಾಮ
ಕತ್ತನು ಕೊಯ್ವುದ ಕಾಣುವೆ ರಾಮ

ಈಜಲು ಹೋಗುವ ಬಾರೋ ರಾಮ
ಮೋಜಿನ ನೀರಲಿ ಅಡೋ ರಾಮ
ಮುಳುಗದ ದೋಣಿಯ ನೋಡೋ ರಾಮ
ಬೆಸ್ತನ ಸ್ನೇಹವ ಕಾಣುವೆ ರಾಮ

ಚಿಟ್ಟೆಯ ಹಿಡಿಯುವ ಬಾರೋ ರಾಮ
ಬಣ್ಣವ ನೋಡಲು ಬಾರೋ ರಾಮ
ಹೊನ್ನಿನ ಬಣ್ಣವು ಕ೦ಡಿತೆ ರಾಮ
ಹೊನ್ನಿನ ಜಿ೦ಕೆಯ ಕಾಣುವೆ ರಾಮ

ಜೂಟಾಟ ಆಡಲು ಬಾರೋ ರಾಮ
ಓಟವು ಮೊದಲಾಯ್ತು ಬಾರೋ ರಾಮ
ಓಡುವ ಕಳ್ಳನ ಹಿಡಿಯೋ ರಾಮ
ಮಾಟದ ದುಷ್ಟನ ಕಾಣುವೆ ರಾಮ

ಆಟದಿ ಸೋತವರಾರೋ ರಾಮ
ಸೋತವನಿಗೂ ಮೋಕ್ಷವೆ ರಾಮ
ಮಾಟದ ಮೈಯದು ಐಕ್ಯವು ರಾಮ
ಶ್ರೀಗುರು ಶ೦ಕರನಾತ್ಮವು ರಾಮ

No comments: