Thursday, November 13, 2014

ಚಾಡಿಕೊರಮ ಚೋಮ


***************
ಭಾರಿ ಸುಳ್ಳುಬುರುಕನಮ್ಮ ಚಾಡಿಕೊರಮ ಚೋಮ
ಅಲ್ಲಿಂದಿಲ್ಲಿ ಇಲ್ಲಿಂದಲ್ಲಿಗೆ ಹೇಳಿತಿದ್ದನಮ್ಮ.
ಒಂದಕ್ಕೆರಡು ಮಾತನಾಡಿ ಚಾಡಿಹೇಳುತ್ತಿದ್ದ,
ಜನಗಳೆಲ್ಲ ಜಗಳವಾಡೆ ನೋಡಿ ನಗುತ್ತಿದ್ದ.
********
ಒಮ್ಮೆ ತಿಪ್ಪಭಟ್ಟ ರಾಗಿ ರೊಟ್ಟಿ ತಟ್ಟುತ್ತಿದ್ದ,
ಚೋಮ ಅಲ್ಲೆ ನಿಂತುಕೊಂಡು ರೊಟ್ಟಿ ನೋಡುತ್ತಿದ್ದ.
ಎರಡೆ ರೊಟ್ಟಿ ತಟ್ಟಿ ಭಟ್ಟ ತಿನ್ನೋದಕ್ಕೆ ಎದ್ದ,
ತನಗೂ ರೊಟ್ಟಿ ಬೇಕೆಂದು ಚೋಮ ಜೋತುಬಿದ್ದ.
ಭಟ್ಟನರ್ಧರೊಟ್ಟಿಯನ್ನು ಚೋಮನಿಗೆ ಕೊಟ್ಟ.
ಇನ್ನೂ ಬೇಕು ಎಂದು ಚೋಮ ಪಟ್ಟುಹಿಡಿದುಬಿಟ್ಟ.
ಹಸಿವೆಯಿಂದ ಸಿಟ್ಟುನೆತ್ತಿಗೇರಿ ಭಟ್ಟ ಕೆಟ್ಟ,
ಚೋಮನನ್ನು ಅಲ್ಲಿಂದ ಓಡಿಸಿಬಿಟ್ಟ.
ಚೋಮ ಜನರ ಮುಂದಿ ಹೀಗೆ, ಚಾಡಿ ಚುಚ್ಚಿಬಿಟ್ಟ.
’ತಿಪ್ಪ ಭಟ್ಟ ನನ್ನ ರೊಟ್ಟಿ ಕಿತ್ತು ತಿಂದುಬಿಟ್ಟ,
ಮತ್ತೆ ನನಗೆ ಪೆಟ್ಟು ಕೊಟ್ಟು ಆಚೆಗಟ್ಟಿಬಿಟ್ಟ,
ಅಲ್ಲಿ ಇಲ್ಲಿ ರಾಗಿಕದ್ದ, ಭಟ್ಟ ಗಂಟು ಕಳ್ಳ
ನನ್ನ ಮನೆಯ ರೊಟ್ಟಿ ಕದ್ದು ಕೊಂಡುಹೋದನಲ್ಲ’
ಭಟ್ಟನನ್ನು ಕಟ್ಟಿಹಾಕಿ ಊರ ಜನರೆಲ್ಲ
ಕೇಳಿದರು ನೂರು ಪ್ರಶ್ನೆ ಸುಮ್ಮನಿರಲಿಲ್ಲ
ಭಟ್ಟ ತನ್ನ ಚಿಕ್ಕ ಮನೆಗೆ ಕರೆದ ಜನರನೆಲ್ಲ
ಮನೆಯ ಒಳಗೆ ಎರಡೇ ಮೊರ ರಾಗಿ ಕಂಡಿತಲ್ಲ
ಎರಡು ರೊಟ್ಟಿ ತಟ್ಟಿದಂಥ ಎಲೆ ಕಂಡರೆಲ್ಲ
ಚಾಡಿಚೋಮ ಸಿಕ್ಕುಬಿದ್ದ, ಹಿಡಿದುಕೊಂಡರೆಲ್ಲ
ಚಾಡಿಚೋಮ ಕಣ್ನು ಬಿಟ್ಟು ನೋಡುತಿದ್ದ ಅಲ್ಲಿ
ಚಾಡಿ ಮಾತು ಉಲ್ಟಾ ಆಗಿ ಕಟ್ಟಿಹಾಕಿತಲ್ಲಿ
ಊರ ಹಿರಿಯರೆಲ್ಲ ಚೋಮನನ್ನು ಬೈದಮೇಲೆ
ಮುಂದೆ ಹೀಗೆ ಮಾಡದಂತೆ ಪೆಟ್ಟು ಕೊಟ್ಟು ಮೇಲೆ
ಚಾಡಿ ಮಾತು ಹೇಳದಂತೆ ಒಳ್ಳೆಚೋಮನೆನೆಸಿ
ಊರಿಗೊಳಿತು ಮಾಡುತಿದ್ದ ಸತ್ಯವನ್ನು ಮೆರೆಸಿ.
ಚಾಡಿಮಾತು ಒಳ್ಳೇದಲ್ಲ ಕೇಳು ಪುಟ್ಟ ಮಗುವೆ
ಆಡಬೇಕು ಸತ್ಯವನ್ನು ಆಗ ನೀನು ಗೆಲುವೆ

3 comments:

ಮನಸಿನಮನೆಯವನು said...

"ಕೆಡುಕ ಬಯಸಿ ಕೆಡುವೆ ಖಚಿತ, ಪಡೆವೆ ನೋವು ಖಂಡಿತ "ಸಾಲುಗಳು ನೆನಪಾದವು, ಚಂದ ಬರೆದಿದ್ದೀರಿ.. ಮಕ್ಕಳೂ ಕೂಡ ಓದಲು ಖುಷಿಪಡುವಂತೆ.

Badarinath Palavalli said...

ಚೋಮ ಬದಲಾದ ಹಾಗೆ ನಮ್ಮ ರಾಜಕಾರಣಿಗಳೂ ಬದಲಾಗುವರೇ? ಒಳ್ಳೆಯವರಾಗಿ?

shared at:
https://www.facebook.com/groups/191375717613653?view=permalink&id=435285689889320

Badarinath Palavalli said...

ಚೋಮ ಬದಲಾದ ಹಾಗೆ ನಮ್ಮ ರಾಜಕಾರಣಿಗಳೂ ಬದಲಾಗುವರೇ? ಒಳ್ಳೆಯವರಾಗಿ?

shared at:
https://www.facebook.com/groups/191375717613653?view=permalink&id=435285689889320