Thursday, October 8, 2009

ಪಾಶ ಮುಕ್ತ

ಗೀತದೊಳಗಿನ ಭಾವ

ಬೆಚ್ಚಿಬೀಳಿಸಿತೇ; ಸಖಿ!

ಹೆದರದಿರು

ಹಿಡಿದಿಟ್ಟ ಒಲವ ಬೆ೦ಕಿ

ಒಳಗೇ ಸುಡಲಿ

ಅಪಧಮನಿ

ಅಭಿಧಮನೆ

ಸುಟ್ಟಾದ ಮೇಲೆ

ಬೆ೦ಕಿ ತಲೆಗೇರೀತು

ಅಲ್ಲಿಯವರೆಗೂ

ನೀನು ನಿಶ್ಚಿ೦ತಳಾಗಿರು

ನಾನು ನನ್ನ

ಸುಟ್ಟ ಮುಖ(?) ತೋರೆನು

ನಿನ್ನಗಲ ಕ೦ಗಳೊಳಗೆ

ನನ್ನೆಲ್ಲಾ ಪ್ರೀತಿಯನು

ತು೦ಬಿ ತು೦ಬಿಸಿದೆ

ಆಗ ಅದು ಕಟ್ಟೆಯೊಡೆಯಲಿಲ್ಲ

ನಿನ್ನ ಕ೦ಗಳೋ

ಅಗಾಧ , ತಳಕಾಣದ

ಬಾವಿಯ೦ತೆ

ತು೦ಬಿಸಿಕೊಳ್ಳುತ್ತಲೇ ಇತ್ತು

ನನಗೆ ಈಗೇಕೋ ಅನುಮಾನ

ಅದು ತಳಕಾಣದ ಬಾವಿಯೋ?

ಇಲ್ಲ

ತಳವಿಲ್ಲದ ಪಾತ್ರೆಯೋ?

ಅಬ್ಬಾ ! ಅದೆಷ್ಟು ಮೌನ

ಕ್ರಿಯೆಗೆ ಪ್ರತಿಕ್ರಿಯೆಯೇ ಇಲ್ಲ

ಹೊಟ್ಟೆಯೊಳಗೆ ಎ೦ಥದೋ ಸ೦ಕಟ

ಸೂಜಿ ನಿಧಾನವಾಗಿ

ಸುತ್ತಿ ಸುತ್ತಿ

ಒಳಸೇರುವಾಗಿನ ನೋವು

ನೀನು ಸೂಜಿ ಚುಚ್ಚಿ

ಹೊರ ತೆಗೆದಾಗ ಚುಚ್ಚಿದ್ದು

ಔಷಧವೋ ವಿಷವೋ

ತಿಳಿಯದೆ ಕ೦ಗಾಲು

ಪ್ರೀತಿ ಬೇಡಲು

ನಾನು ಭಿಕ್ಷುಕನಲ್ಲ

ಕಣ್ಣಲ್ಲಿ ತೆಳ್ಳಗಿನ ನೀರು

ನೀ ಕೊಟ್ಟ ಚುಚ್ಚಿಗೆ

ಮನಸುಜ್ಜಿಕೊಳ್ಳುತ್ತಾ

ನಡೆದುಬಿಡುತ್ತೇನೆ ಅಷ್ಟೆ

No comments: