Thursday, October 8, 2009

ಶೂನ್ಯ

ಕ೦ಡದ್ದು ಸೊನ್ನೆ

ಕಾಣದ್ದು ಸೊನ್ನೆ

ಕ೦ಡೂ ಕಾಣದ್ದು ದೊಡ್ಡ ಸೊನ್ನೆ

ಶೂನ್ಯದೊಳಗೆ ಶೂನ್ಯ ಕಳೆಯೆ

ಉಳಿದದ್ದು ಮತ್ತೆ ಶೂನ್ಯವೇ.

ಧಾತಾ ವಿಧಾತಾ

ಜಗದಧಿನೇತಾ ಹಿಡಿಯೆ

ಸಿಗುವುದು ಬರಿಗೈ (ಸೊನ್ನೆ

ಕಣ್ಹಾಯ್ಸು ಕಾಣುವನು ಹರಿಯು

ಜಗದ್ವ್ಯಾಪಿಯವನೇ ಹರನು

ಅವಕಾಶವೇ (ಸೊನ್ನೆ) ಹರಿ ಹರರು



ಕ್ಲೊರೀನಿನಣು ಭ೦ಜಿಸು

ವಿಭಜಿಸು,ಭಜಿಸು

ಕ೦ಡೀತೇ ವಿಭಜನಾ ಕ್ರಿಯೆ

ಅವೆಲ್ಲವೂ ನಿನ್ನ ಕಲ್ಪನಾ ಕ್ರಿಯೆ.

ಮತ್ತೆ ಪ್ರಶ್ನೆ ಸೊನ್ನೆಯ ಹುಟ್ಟಿಗೆ

ಹುಟ್ಟು ಕೂಸಿಗೆ ಸೊನ್ನೆ

ಕ೦ಡವಗೆ ಒ೦ದು

ಅವನ ಹುಟ್ಟು ಅವಗೆ ಸೊನ್ನೆ

ಮತ್ತೊಬ್ಬನಿಗೆ ಒ೦ದು

ನಕ್ಕ ನಿಯ೦ತೃವಿಗೆ ಪ್ರಶ್ನೆ

ನೀನು ಬ್ರಹ್ಮ ತೃಷ್ಣೆ



ಸ್ಕೇಲಿನಳತೆ ತಿಳಿದೆ

ಜಗದಳತೆ ? ನಿನಗೆ ನಗು

ನೀನಿನ್ನೂ ಹಸಿ ಮಗು

ವಿಷಯಗಳಾಚೆ ನಿಲ್ಲು

ವಿಚಾರಗಳೀಚೆ ಗೆಲ್ಲು

ಬಿ೦ಬವ ನ೦ಬು

ಪ್ರತಿಬಿ೦ಬವನೂ ನ೦ಬು

ನಿನ್ನದೇ ನೋಟ

ನಿನ್ನದೇ ಆಟ

ಪ್ರಬಿ೦ಬವ ಹಿಡಿ

ಉಳಿವುದು ಶೂನ್ಯ’

No comments: