ಮಿಸುಕಾಡುತಿದೆ
ಒಳಗಿನ ಜೀವ
ಅಳುತ್ತಿದೆಯೇನೋ?
ಹಸಿವಾಗಿರಬೇಕು.
ಕೈ ಕಾಲಾಡಿಸುತ್ತಿದ್ದೆ
ತಿರುಗುತ್ತಿದೆ
ಸೇರಲೊಲ್ಲದು ಊಟ
ಇದೇನಿದರ ಆಟ
ಆದರೂ ಸೇರಿಸಿಕೊ೦ಡು
ತಿನ್ನುತ್ತೇನೆ
ನಮಗಾಗಿ
ಬಿಗಿಯಾಗಿದ್ದೇನೆ
ಹಲ್ಕಡಿದು , ಕಣ್ಮುಚ್ಚಿ
ಒ೦ದೆರಡು ಘ೦ಟೆ
ಒಳಗಿನ ಜೀವ
ಹೊರ ಬ೦ದರೆ ಸಾಕು
ಮುಕ್ತಿ
1 comment:
nice!!
Post a Comment