Tuesday, November 24, 2015

ದೇಮವ್ವನ ಸವಾರಿ- ಚತುರೋಕ್ತಿ (೨)


ಸತ್ಯವ ತಿರುಚುವ ಸುದ್ದಿಮನೆಯಲಿ ದೇಮವ್ವನ ದಂಡು

ಭೂತದ ಕೋಲದ ಭೂತಳದೊಳಗೆ ಭೂಗತ ಲೋಕದ ಗುಂಡು
ಹೂತು ಹೋಗುವ ಭಯದವಗಾಹನೆ ಬೇತಾಳನ ಚಂಡು

ಹುಟ್ಟಿಹುದಿಲ್ಲೆ, ತಿನ್ನುವುದಿಲ್ಲೆ, ಇರುವಿನ ತಿರುವುಗಳಾಚೆಯಲಿ
ಸುಳ್ಳು ಚರಿತ್ರೆಯ ಬರೆಸಿಹರಿಲ್ಲಿ ಮತ್ತದನೆ ಮೇಲೆತ್ತುವರು
ಯಾರದೊ ಕಣ್ಣಲಿ ಕಾಣುವ ಸತ್ಯವ ತಮ್ಮದೆನ್ನುವಹಮ್ಮಿನಲಿ

ಸುದ್ದಿಯ ಗುದ್ದಿ, ಮೆದ್ದು ತಿದ್ದುತ, ಓಹೋ! ಹಾಕು ಧಿಂಗಿಣ
ಚಾರು ಚರಿತ್ರೆಯ ಚೂರು ಚೂರು, ಠೀಕು ಜೀಕು ಟಿಂಗಣ,
ಮುತ್ತು ಸುತ್ತು, ಹತ್ತಿ ಹಾರು ಇದು ಸತ್ಯ, ಇದಮಿತ್ಥಂ!
ಚಲಿಸು ಮರುಕಳಿಸು ಮರು ಕಳಿಸು ಮರು ಕಳಿತು ಕಳಿಸು

No comments: