Thursday, September 22, 2016

ಗರುಡ

ಆಕಾಶದುದ್ದಕ್ಕೂ ತನ್ನೆರಡು ರೆಂಕೆಯನು
ಚಾಚುತ್ತ ಬರುತಲಿದೆ ಗರುಡ ಪಕ್ಷಿ
ಭೂಮಿಗತ್ತಲುಗವಿದು ಬಿರುಗಾಳಿ ಬೀಸುತಿದೆ
ಹಾರುತಿದೆ ರಕ್ಕಸರ ಪ್ರಾಣಪಕ್ಷಿ
ರುದ್ರಭೀಕರ ನೇತ್ರ ಅಲುಗಿನಂತಿವೆ ಚಂಚು
ಪ್ರಳಯ ದಾವನಳದ ಮೂರ್ತಿಯಿವನು
ಪುರುಷೋತ್ತಮಾಗಮನ ಕೌರವನ ಅಂತ್ಯವಿದು
ಗರುಡನೇ ಓದುವನು ಶಿಕ್ಷೆಯನ್ನು

No comments: